CBSE Class 12 Kannada Syllabus 2026-27
The CBSE Class 12 Kannada Syllabus for 2026-27 (Code No. 115) outlines the course structure and content for the academic year. It emphasizes the importance of Kannada as a mother tongue for personal development and societal contribution. The syllabus includes sections on Poetry, featuring Vachanagalu by Basavanna and Urilinga Peddi, and various other poems. The Prose section covers topics like 'Aaykeyide namma kaiyalli' and 'Kannadavannu kattuva kelasa'. A Deergaha Gadya section is dedicated to 'Krishnegowdana aane' by K. P. Poornachandra Tejaswi. Additionally, students will engage in Creative Writing, including essay and letter writing, Grammar, and Comprehension (seen and unseen). A brief outline of the History of Kannada Literature, focusing on major poets like Basavanna and Kumaravyasa, is also part of the curriculum.
Quick info
| Board | CBSE |
|---|---|
| Class | 12 |
| Subject | Kannada |
| Session | 2026-27 |
| Language | English |
| Type | Syllabus |
Syllabus PDF preview
Read page by page below. PDF is streamed from the official NCERT website — no download button on this page.
Full document text
KANNADA SYLLABUS 2026-27 CODE NO 115 CLASS XII
Table of Content
S.No CONTENT PAGE No
1 Rationale 2 Aims & Objectives 2
3 Course Structure 3-4
4 Course content 5-8
5 Guidelines for internal assessment 9
(Practical/ Projects etc) 6 Prescribed Textbook 10-11
ತಾರ್ಕಿಕ ಹಿನ್ನೆಲೆ
ಯಾವುದೇ ಭಾಷೆ ಸಾಮಾಜಿಕ ಸಂಪರ್ಕವನ್ನು ಸಾಧಿಸುವ ಸಂಪರ್ಕ ಕೊಂಡಿಯಾಗಿದೆ. ಮಾನವ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಭಾಷೆ ಮಾಧ್ಯಮವಾಗಿದೆ. ಅದರಲ್ಲೂ ಮಾತೃಭಾಷೆ ಮಾನವ ಬದುಕಿನ ಜೀವತಂತುವಿದ್ದಂತೆ. ಹೀಗಾಗಿ ಮನುಷ್ಯ ಬಾಳಲು-ಬೆಳೆಯಲು ಮಾತ್ಯಭಾಷೆ ಅತ್ಯಂತ ಅಗತ್ಯವಾಗಿದೆ. ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಎಷ್ಟೇ ಭಾಷೆಗಳನ್ನು ಕಲಿತಿದ್ದರೂ ಕೂಡ ಆತನ ಆಲೋಚನೆಗಳು, ಆಚಾರ- ವಿಚಾರಗಳು ಮನದಲ್ಲಿ ಮೂಲತಃ ರೂಪುಗೊಳ್ಳುವುದು ಮಾತೃಭಾಷೆಯಲ್ಲಿಯೇ. ಹೀಗಾಗಿ ಮಾತ್ಯ ಭಾಷೆ ವ್ಯಕ್ತಿತ್ವದ ಮೂಲ ದ್ರವ್ಯವಾಗಿದೆ. ಅದನ್ನು ಬಿಟ್ಟು ಆತನಿಗೆ ಬದುಕಿಲ್ಲ. ನಿಜವಾಗಿ ಹೇಳಬೇಕೆಂದರೆ ವ್ಯಕ್ತಿಯ ಮಾತೃಭಾಷೆಯ ಶಕ್ತಿಯ ಮೇಲೆ ಆತನ ವ್ಯಕ್ತಿತ್ವದ ಸಾಮರ್ಥ್ಯವೂ ನಿರ್ಮಾಣವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆ ಮಾತೃಭಾಷೆಯಲ್ಲಿಯೇ ಬೋಧನೆ ನಡೆಯಬೇಕೆಂಬುದನ್ನು ಹೀಗೆ ವಿವರಿಸಬಹುದು.
ಒಬ್ಬ ಮನುಷ್ಯ ಏನನ್ನೇ ಆಗಲಿ ಯೋಚಿಸುವುದು-ಹೇಳುವುದು ತನ್ನ ಮಾತೃಭಾಷೆಯಲ್ಲಿ. ಆತ ತನ್ನ ಬದುಕಿನ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದು ಮಾತೃಭಾಷೆಯಲ್ಲಿ. ತನ್ನ ಸುತ್ತಮುತ್ತಲ ಜನರ ಜೊತೆ-ಸಮಾಜದ ಜೊತೆ ಸಂಪರ್ಕಿಸುವುದು ಮಾತೃ ಬಾಷೆಯಲ್ಲಿಯೇ. ಹೀಗಾಗಿ ಆತನ ಜೀವ-ಜೀವನ ಪುಷ್ಮಿಗೊಳ್ಳುವುದು ಮಾತೃಭಾಷೆಯಲ್ಲಿಯೇ. ಹೀಗಿರುವಾಗ ತನ್ನ ಮಾತೃಭಾಷೆಯನ್ನು ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಆತ ಸಮರ್ಥವಾಗಿ ಏನೂ ಮಾಡಲಾರ.
ತನ್ನ ಬದುಕನ್ನು ರೂಪಿಸುವ ಭಾಷೆಯಲ್ಲಿಯೇ ವಿದ್ಯಾರ್ಥಿಗೆ ಶಿಕ್ಷಣ ದೊರಕಿದರೆ ಆತ ತನ್ನನ್ನು ಸಂಪೂರ್ಣವಾಗಿ ಅಭಿವ್ಯಕ್ತಿಸಿಕೊಂಡು ಪೂರಣ ವ್ಯಕ್ತಿತ್ವ ಬೆಳೆಸಿಕೊಳ್ಳಬಲ್ಲ. ತನಗೆ ಅನುಗುಣವಾದ ಆಸೆ-ಆಕಾಂಕ್ಷೆಗಳಂತೆ ಬದುಕಬಲ್ಲ. ಆತನ ಬದುಕನ್ನು ಭಾಷೆಯ ತೊಡಕಿನಿಂದಲೇ ನಾವು ಕಟ್ಟಿಹಾಕಿಬಿಟ್ಟರೆ ಆತನ ಬೆಳೆಯುವ ಸ್ವಾತಂತ್ರ್ಯವನ್ನೇ ಸಮಾಜ ಕಸಿದುಕೊಂಡಂತಾಗುತ್ತದೆ. ಮನುಷ್ಯನ ಸರ್ವಾಂಗೀಣ ಬೆಳವಣಿಗೆ ಆಗಬೇಕೆಂದರೆ ಆತನಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಅತಿ ಅಗತ್ಯವಾಗಿ ಬೇಕು.
ಮಾತೃಭಾಷೆ ಮತ್ತು ಮಾತೃಭಾಷಾ ಸಾಹಿತ್ಯ ಎಲ್ಲರಿಗೂ ಅತ್ಯಂತ ಪ್ರಿಯವಾಗಿರುತ್ತದೆ. ಕಾರಣವೆಂದರೆ ಅದನ್ನು ಅರ್ಥೈಸಿಕೊಳ್ಳಲು ಕಷ್ಟಪಡಬೇಕಾಗಿಲ್ಲ. ಮಾತೃಭಾಷೆಯಲ್ಲಿ ವ್ಯಕ್ತಿ ಎಲ್ಲವನ್ನೂ ಆರ್ಥೈಸೊಕೊಳ್ಳಬಲ್ಲ- ಆನಂದಿಸಬಲ್ಲ-ಬದುಕಬಲ್ಲ ಮತ್ತು ಬೆಳೆಯಬಲ್ಲ. ಆನಂದದ ಓದು-ಇಷ್ಟಪಟ್ಟು ಓದುವ ಓದು ಮನುಷ್ಯನನ್ನು ಇನ್ನಿಲ್ಲದ ಎತ್ತರಕ್ಕೆ ಏರಿಸುತ್ತದೆ, ವ್ಯಕ್ತಿತ್ವದ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದರಿಂದ ಉತ್ತಮ ಸಮಾಜದ ನಿರ್ಮಾಣವೂ ಆಗುತ್ತದೆ.
ಹಿಂದೆಂದಿಗಿಂತಲೂ ಇಂದು ಮಾತೃಭಾಷೆಯಲ್ಲಿಯ ಓಧು ಹೆಚ್ಚು ಅಗತ್ಯವಾಗಿದೆ. ಪರಭಾಷೆಗಳ ದಾಳಿಗೆ, ವ್ಯಾಮೋಹಕ್ಕೆ ಯುವಜನತೆ ಒಳಗಾಗುತ್ತಿದೆ. ಅವರಿಗೆ ಇತ್ತ ಮಾತೃಭಾಷೆಯ ಮೇಲೂ ಸರಿಯಾದ ಹಿಡಿತವಿಲ್ಲ, ಅತ್ತ ಪರಭಾಷೆ ಕೂಡ ಅರ್ಥವಾಗುತ್ತಿಲ್ಲ. ಹೀಗಾಗಿ ಯಾವ ಭಾಷೆಯಲ್ಲೂ ಭಾವನೆಗಳ ಅಭಿವ್ಯಕ್ತಿ ಸಾಧ್ಯವಾಗದೆ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ಅಭಿವ್ಯಕ್ತಿ ಮಾಧ್ಯಮ ಸರಿಯಾಗಿರದಿದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಅಲ್ಲದೇ ವಿದ್ಯಾರ್ಥಿಗಳನ್ನು ಸಂಸ್ಕೃತಿಹೀನತೆಯತ್ತ ಕೊಂಡೊಯ್ಯುವ ಅಪಾಯವೂ ಇದೆ. ಇದನ್ನೆಲ್ಲ ತಡೆಗಟ್ಟಲು ಇರುವ ಪರಿಹಾರವೇ ಮಾತೃಭಾಷೆಯಲ್ಲಿ ನೀಡುವ ಶಿಕ್ಷಣ. ವ್ಯಕ್ತಿ ತನ್ನ ನೆಲ-ಜಲ-ಸಂಸ್ಕೃತಿಗಳಿಗೆ ಅನುಗುಣವಾಗಿ ಬಾಳುತ್ತ, ಸಾಹಿತ್ಯದಿಂದ ಸ್ಫೂರ್ತಿ ಪಡೆಯುತ್ತ ಸಂಪೂರ್ಣ ವ್ಯಕ್ತಿತ್ವ ವಿಕಾಸ ಹೊಂದಲು, ಉತ್ತಮ ರಾಷ್ಟ್ರ ನಿರ್ಮಾಪಕನಾಗುವಲ್ಲಿ ಮಾತೃಭಾಷಾ ಬೋಧನೆಯ ಪಾತ್ರ ಅತ್ಯಂತ ಮಹತ್ವಪೂರ್ಣವಾದುದಾಗಿದೆ.
ಗುರಿಗಳು ಮತ್ತು ಉದ್ದೇಶಗಳು
ಭಾಷೆ ಎನ್ನುವುದು ಮಾನವ ವಿಕಾಸದ ಮೂಲಮಂತ್ರ. ಅದಿಲ್ಲದಿದ್ದರೆ ಮಾನವ ತನ್ನ ಅನಿಸಿಕೆಗಳನ್ನು ಸಮರ್ಥವಾಗಿ ವ್ಯಕ್ತಪಡಿಸಲಾರ. ಏಕೆಂದರೆ ಭಾಷೆ ಮೂಲತಃ ಅಭಿವ್ಯಕ್ತಿ ಮಾಧ್ಯಮ. ಆ ಹಿನ್ನೆಲೆಯಲ್ಲಿ ವ್ಯಕ್ತಿಯ ಬೆಳವಣಿಗೆಗೆ ಅನುಗುಣವಾಗಿ ಭಾಷೆಯ ಅಗತ್ಯತೆ ಮತ್ತು ಮಹತ್ವಗಳೂ ಕೂಡ ವಿಭಿನ್ನವಾಗಿರುತ್ತವೆ. ಅವನ್ನು ಈ ಕೆಳಗಿನಂತೆ ವಿವರಿಸಬಹುದು.
1.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ವ್ಯಕ್ತಿಯ ಅನಿಸಿಕೆಗಳನ್ನು ಮಾತ್ರ ಇನ್ಸೊಬ್ಬರಿಗೆ
ಅರ್ಥವಾಗುವಂತೆ ಸಮರ್ಥವಾಗಿ ವ್ಯಕ್ತಪಡಿಸುವುದು ಮೂಲ ಉದ್ದೇಶವಾಗಿರುತ್ತದೆ. ಆದರೆ ಪದವಿಪೂರ್ವ ಹಂತ ಇದನ್ನು ಮೀರಿದ ಹಂತವಾಗಿದೆ. ವ್ಯಕ್ತಿ ತನ್ನ ಆಸೆ-ಆಕಾಂಕ್ಟೆಗಳು, ಬದುಕಿನ ಗೊತ್ತು-ಗುರಿಗಳನ್ನು ಕಂಡುಕೊಳ್ಳುವ ಹಂತ ಇದಾಗಿದೆ. ಹೀಗಾಗಿ ಇದನ್ನು ವ್ಯಕ್ತಿತ್ವ ವಿಕಸನದ ಹಂತ ಎಂದು ಕರೆಯಬಹುದು. ಈ ಹಂತದಲ್ಲಿ ವ್ಯಕ್ತಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಬದುಕನ್ನು ರೂಪಿಸಿಕೊಳ್ಳಲು ಹೊರಟಿರುತ್ತಾನೆ. ಇದು ಒಂದರ್ಥದಲ್ಲಿ ಕನಸುಗಳ ಕಾಲವೂ ಹೌದು. ಅಂತಹ ಸಂದರ್ಭದಲ್ಲಿ ಈ ಹಾರುವ ಹಕ್ಕಿಗೆ ಭಾಷೆ ರೆಕ್ಕೆಪುಕ್ಕಗಳನ್ನು ಕಟ್ಟಿಕೊಢುತ್ತದೆ. ಅದಕ್ಕೆ ಆತನ ಮಾತೃಭಾಷೆ ಶಕ್ತಿ ಸಾಮರ್ಥ್ಯಗಳನ್ನು ಒದಗಿಸಿಕೊಡುತ್ತದೆ.
2.ಪದವಿಪೂರ್ವ ಕಲಿಕೆಯ ಹಂತದಲ್ಲಿ ವಿದ್ಯಾರ್ಥಿ ಭಾಷಾ ಕಲಿಕೆಯ ಮೂಲ ಹಂತವನ್ನು ದಾಟಿ ಸಾಹಿತ್ಯ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವ ಹಂತಕ್ಕೆ ತಲುಪಿರುತ್ತಾನೆ. ವೇಗವಾಗಿ ಬೆಳೆಯುತ್ತಿರುವ ಆತನ ದೈಹಿಕ ವಿಕಾಸದ ಜೊತೆಗೆ ಮಾನಸಿಕ ಬೆಳವಣಿಗೆ ಮತ್ತು ವಿಕಾಸಕ್ಕೆ ಅಗತ್ಯವಾದ ವೈಚಾರಿಕತೆಯನ್ನು ಸಾಹಿತ್ಯ ಮತ್ತು ಭಾಷೆ ಒದಗಿಸಿಕೊಡುತ್ತದೆ. ಯೋಚನೆಗಳು ಸರಿಯಾದ ದಾರಿಯಲ್ಲಿ ಮುನ್ನಡೆದಾಗ ಮಾತ್ರ ಮಾತಿನ ಸಮರ್ಥ ಅಭಿವ್ಯಕ್ಕಿ ಸಾಧ್ಯವಾಗುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿ ಓದುವ ಭಾಷೆ ಮತ್ತು ಸಾಹಿತ್ಯ ಪ್ರೌಢ ಶಿಕ್ಷಣಕ್ಕಿಂತ ಉನ್ನತ ಮಟ್ಟದ್ದಾಗಿರುವುದರಿಂದ ಈ ಹಂತದ ಓದು ವ್ಯಕ್ತಿತ್ವ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಮತ್ತು ವಿದ್ಯಾರ್ಥಿಯನ್ನು, ಯುವ ಜನಾಂಗವನ್ನು ಮುನ್ನಡೆಸಲು ಇದೇ ಸರಿಯಾದ ಕಾಲವಾಗಿರುವುದರಿಂದ ಸಾಹಿತ್ಯ ಅಥವಾ ಮಾತೃ ಭಾಷೆಯಲ್ಲಿನ ಓದು ಅವರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯಲು ದಾರಿ ತೋರಿಸುತ್ತದೆ.
3.ಮಾತೃಭಾಷೆಯ ಸಾಹಿತ್ಯದ ಓದು ವ್ಯಕ್ತಿಯನ್ನು ತಳಮಟ್ಟದಿಂದ ಮೇಲಕ್ಕೆತ್ತುತ್ತದೆ. ಒಬ್ಬ ವ್ಯಕ್ತಿ ಯಾವುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬಲ್ಲನೋ ಆತ ಮುಂದೆ ಯಾವುದರ ಬಗೆಗಾದರೂ ಸರಿಯಾಗಿ ಯೋಚಿಸಬಲ್ಲ ಮತ್ತು ಒಂದು ವಿಷಯದ ಬಗ್ಗೆ ಸರಿಯಾದ ನಿರ್ಧಾರವನ್ನೂ ಕೈಗೊಳ್ಳಬಲ್ಲ. ಸ್ವಂತ ವಿಚಾರ, ಸ್ವತಂತ್ರ ಆಲೋಚನಾ ಶಕ್ತಿ ಮತ್ತು ದಿಟ್ಟ ನಿರ್ಧಾರಗಳಿಗೆ ಈ ಹಂತದ ಸಾಹಿತ್ಯದ ಓದು ಸಹಾಯಕವಾಗುತ್ತದೆ. ವ್ಯಕ್ತಿಯ ಗಟ್ಟಿತನ ಮತ್ತು ದಿಟ್ಟತನಗಳ ಬದುಕಿಗೆ ಪದವಿಪೂರ್ವ ಸಾಹಿತ್ಯದ ಓದು ಸಾಕಷ್ಟು ನೆರವಾಗುವುದಲ್ಲದೇ ದೇಶದ ಉತ್ತಮ ಪ್ರಜೆಯೂ, ಆಸ್ತಿಯೂ ಆಗಿ ಬೆಳೆಯುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
4.ಪರಭಾಷಾ ವ್ಯಾಮೋಹ ಮತ್ತು ವಿದೇಶೀ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಗಾಗುತ್ತಿರುವ ಇಂದಿನ ಯುವ ಜನತೆಗೆ ಮಾತೃಭಾಷೆ ಮತ್ತು ಸಾಹಿತ್ಯದ ಮೂಲಕ ಸರಿಯಾದ ಮಾರ್ಗದರ್ಶನವನ್ನು ಮಾಡುವುದು ಸರಕಾರದ, ಸಮಾಜದ ಜವಾಬ್ದಾರಿಯೂ ಆಗಿದೆ. ಸಾಹಿತ್ಯದ ಓದು ಉತ್ತಮ ಸಂಸ್ಕಾರಗಳನ್ನು ಕೊಡುವುದರಿಂದ ಉತ್ತಮ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಪದವಿಪೂರ್ವ ಹಂತದಲ್ಲಿ ಮಾತೃ ಭಾಷೆಯಲ್ಲಿ ಸಾಹಿತ್ಯ ಬೋಧನೆ ಮಾಡುವುದರಿಂದ ಸದ್ಯಢ ರಾಷ್ಟ್ರ ನಿರ್ಮಾಣವೂ ಸಾಧ್ಯವಾಗುತ್ತದೆ.
KANNADA CODE NO. 115 CLASS XII 2026 - 2027
COURSE STRUCTURE
S.No TOPIC POETRY 1 Vachanagalu.(Basavanna mattuUrilinga peddiya vachanagalu) 2 Innunhuttade irali naariyarennavolu. 3 Pageyam baalakanembare? 4 Jaaliya maradamte. 5 Habbale avara rasaballi. 6 Shilube eriddaane. 7 Omdu hoo hechchige iduttini. 8 Omme nagutteve. PROSE 1 Aaykeyide namma kaiyalli. 2 Kannadavannu kattuva kelasa. 3 Dhanigala belli lota. 4 Badukannu preetisida santa. 5 Tirulgannadada belnudi. DEERGHA GADYA 1 Krishnegowdana aane – By : K. P. POORNACHANDRA TEJASWI Creative writing
- Essay
- Letter to Editor/Official letter Grammar Unseen Comprehension Seen Comprehension (S.C)
A brief outline History of Kannada Literature consisting of major poets and poetesses included in the prescribed textbook.
- Basavanna
- Kumaravyasa
Frequently asked questions
What is the code number for CBSE Class 12 Kannada for the 2026-27 session?
The code number for CBSE Class 12 Kannada for the 2026-27 session is 115.
What are the main sections covered in the Class 12 Kannada syllabus?
The syllabus covers Poetry, Prose, Deergaha Gadya, Creative Writing (Essay, Letter to Editor/Official Letter), Grammar, Unseen Comprehension, Seen Comprehension, and a brief outline of the History of Kannada Literature.
Which poets are mentioned in the Poetry section?
The Poetry section includes Vachanagalu by Basavanna and Urilinga Peddi, among other poems.
What is the Deergaha Gadya topic?
The Deergaha Gadya topic is 'Krishnegowdana aane' by K. P. Poornachandra Tejaswi.
What aspects of Kannada literature history are included?
A brief outline of the History of Kannada Literature is included, focusing on major poets and poetesses mentioned in the prescribed textbook, such as Basavanna and Kumaravyasa.
What types of writing skills are assessed?
Creative writing skills assessed include essay writing and writing letters to the editor or official letters.
CBSE Class 12 Kannada syllabus 2026-27. Last updated 10 Aug 2026.